Index   ವಚನ - 108    Search  
 
ಶಿವಶಿವಾ ಎನ್ನಿರೋ! ಶಿವನ ಧ್ಯಾನಕ್ಕೆ ತನ್ನಿರೊ! ಶಿವನು ಕೈಲಾಸ ಮೇರು ಮಂದಿರದಲ್ಲಿಲ್ಲ ನೋಡಿರೊ! ಶಿವನು ಭಕ್ತಿಗೆ ಸೋತು ನಿಮ್ಮೊಳಗಿಪ್ಪನು ಕಾಣಿರೋ! ಅದೆಂತೆಂದೊಡೆ: ಶಿವನ ವಾಕ್ಯ - ``ನಾಹಂ ವಸಾಮಿ ಕೈಲಾಸೇ ನ ಮೇರೌ ನ ಚ ಮಂದರೇ | ಮದ್‍ಭಕ್ತಾ ಯತ್ರ ತಿಷ್ಠಂತಿ ತತ್ರ ತಿಷ್ಠಾಮಿ ಪಾರ್ವತಿ ||'' ಎಂದುದಾಗಿ, ಆಲಸ್ಯವಿಲ್ಲದೆ ಒಲಿಸಿರೋ ನಮ್ಮ ಅಖಂಡೇಶ್ವರನೆಂಬ ಪರಶಿವನ.