Index   ವಚನ - 115    Search  
 
ಚತುರ್ವೇದಿಗಳಾದ ಶತಕೋಟಿ ಬ್ರಾಹ್ಮಣರಿಗೆ ನಿತ್ಯ ಭೋಜನ ಮಾಡಿಸಿದ ಫಲವು, ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ! ಸಪ್ತಕೋಟಿ ಕೆರೆಯ ಕಟ್ಟಿಸಿದ ಫಲವು, ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ! ಅಶ್ವಯಜ್ಞಂಗಳ ಸಹಸ್ರಕೋಟಿ ಮಾಡಿದ ಫಲವು, ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ! ಅದೆಂತೆಂದೊಡೆ: ``ಶತಕೋಟಿ ವೇದವಿಪ್ರಾಣಾಂ ತಟಾಕ ಸಪ್ತಕೋಟಿನಾಮ್ | ವಾಜಿಕೋಟಿ ಸಹಸ್ರಾಣಾಮೇಕಭಿಕ್ಷಾ ಸಮರ್ಪಣಮ್||'' ಎಂದುದಾಗಿ, ನಮ್ಮ ಅಖಂಡೇಶ್ವರಸ್ವರೂಪವಾದ ನಿಜಜಂಗಮಕ್ಕೆ ನೀಡಿದ ಫಲಕ್ಕೆ ಇನ್ನಾವ ಫಲವು ಸರಿಯಿಲ್ಲ ನೋಡಿರೊ!