Index   ವಚನ - 116    Search  
 
ಮತ್ತೆ ಕೇಳಿರೋ, ಸತ್ಪಾತ್ರಜಂಗಮಕ್ಕೆ ಇತ್ತ ಪುಣ್ಯವು ಸಾವಿರಕೊಡವಾಲು ದಾನದ ಫಲವು, ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ! ನೂರುಕೊಡ ತುಪ್ಪದ ದಾನದ ಫಲವು, ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ! ಕೋಟಿಯಜ್ಞಂಗಳ ಮಾಡಿದ ಫಲವು, ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ! ಅದೆಂತೆಂದೊಡೆ: ಕ್ಷೀರಕುಂಭಸಹಸ್ರೇಣ ಘೃತಕುಂಭಶತೈರಪಿ| ಭಸ್ಮಾಂಗಿಭಿಕ್ಷಮಾತ್ರೇಣ ಕೋಟಿಯಜ್ಞಫಲಂ ಭವೇತ್ ||'' ಎಂದುದಾಗಿ, ಜಂಗಮಕ್ಕೆ ನೀಡಿ ನಮ್ಮ ಅಖಂಡೇಶ್ವರಲಿಂಗವನೊಲಿಸಿರೋ.