Index   ವಚನ - 124    Search  
 
ಸುರಚಾಪದಂತೆ ತೋರಿ ಅಡಗುವ ತನುವ ನೆಚ್ಚಬೇಡರೋ! ಸಚ್ಚಿದಾನಂದ ಗುರುಲಿಂಗಜಂಗಮದ ಪೂಜೆಯ ನಿಚ್ಚ ನಿಚ್ಚ ಮಾಡಿದರೆ ಮಚ್ಚಿ ಮಹಾಪದವಿಯನೀವ ನಮ್ಮ ಅಖಂಡೇಶ್ವರ.