Index   ವಚನ - 279    Search  
 
ಕಟ್ಟಿದೆನು ಬಿರಿದು ಶಿವನಲ್ಲದೆ ಬೇರೆದೇವರಿಲ್ಲವೆಂದು. ಕಟ್ಟಿದೆನು ಬಿರಿದು ಶಿವಾಚಾರದಿಂದೆ ಬೇರೆ ಘನವಿಲ್ಲವೆಂದು. ಕಟ್ಟಿದೆನು ಬಿರಿದು ಶಿವಶರಣರಲ್ಲದೆ ಬೇರೆ ಹಿರಿಯರಿಲ್ಲವೆಂದು ಅಖಂಡೇಶ್ವರಾ ನೀ ಸಾಕ್ಷಿಯಾಗಿ.