Index   ವಚನ - 280    Search  
 
ವೇದಂಗಳು ನಿಮ್ಮ ಭೇದಿಸಲರಿಯವು ನೋಡಾ! ಆಗಮಂಗಳು ನಿಮ್ಮ ಹೊಗಳಲರಿಯವು ನೋಡಾ! ಶ್ರುತಿತತಿಗಳು ನಿಮ್ಮ ಸ್ತುತಿಸಲರಿಯವು ನೋಡಾ! ಶಾಸ್ತ್ರಂಗಳು ನಿಮ್ಮ ಸಾಧಿಸಲರಿಯವು ನೋಡಾ ಅಖಂಡೇಶ್ವರಾ.