Index   ವಚನ - 300    Search  
 
ನೆರೆಹೊಲ್ಲ ದುರಾಚಾರಿಗಳ, ನೆರಹೊಲ್ಲ ಜಾರಚೋರರ, ನೆರೆಹೊಲ್ಲ ಬ್ರಹ್ಮೇತಿಕಾರರ, ನೆರೆಹೊಲ್ಲ ಸುರೆಭುಂಜಕರ, ನೆರೆಹೊಲ್ಲ ಗುರುತಪ್ಪುಕರ, ನೆರೆಹೊಲ್ಲ ಹುಸಿಡಂಭಕರ, ಅದೇನು ಕಾರಣವೆಂದೊಡೆ: ಬಿರುಗಾಳಿಯ ಸಂಗದಿಂದ ಜ್ಯೋತಿ ಅಳಿದು ಹೋಗುವಂತೆ, ಇಂತಪ್ಪ ಪಂಚಮಹಾಪಾತಕರ ನೆರೆಹೊರೆಯ ಸಂಗದಲ್ಲಿರ್ದವಂಗೆ ಅನಂತಕಾಲ ಮಾಡಿದ ಪುಣ್ಯವು ಕೆಟ್ಟು ಹೋಗಿ ಮುಂದೆ ಪಾಪವು ಬೆಂಬತ್ತಿ ಕಾಡುವುದಯ್ಯ ಅಖಂಡೇಶ್ವರಾ.