Index   ವಚನ - 301    Search  
 
ಮಾಡಬಾರದು ಮಾಡಬಾರದು ಮಾನಹೀನ ಮತಿಭ್ರಷ್ಟರ ಸಂಗವ. ಮಾಡಬಾರದು ಮಾಡಬಾರದು ಪಾಶಬದ್ಧಕ್ಲೇಶಜೀವರ ಸಂಗವ. ಮಾಡಬಾರದು ಮಾಡಬಾರದು ಹುಸಿಡಂಭಕ ಹುಸಿಹುಂಡರ ಸಂಗವ. ಮಾಡಿದಡೆ ಭವದಲ್ಲಿ ಘಾಸಿಯಲ್ಲದೆ ಮುಕ್ತಿಯ ಲೇಸಿಲ್ಲವಯ್ಯ ಅಖಂಡೇಶ್ವರಾ.