Index   ವಚನ - 302    Search  
 
ಒಬ್ಬರೊಬ್ಬರ ಸಂಗವ ಬಯಸುತಿರ್ಪವರು ನೀವು ಕೇಳಿರೋ! ಮನಕ್ಕೆ ಮನ ತಾರ್ಕಣೆಯಾಗದವರ ಸಂಗವದೇತರ ಸಂಗ? ಬುದ್ದಿ ಬುದ್ದಿ ಕೂಟಸ್ಥವಾಗದವರ ಸಂಗವದೇತರ ಸಂಗ? ಶೀಲ ಶೀಲ ಒಂದಾಗದವರ ಸಂಗವದೇತರ ಸಂಗ? ಭಾವ ಭಾವ ಏಕಾರ್ಥವಾಗದವರ ಸಂಗವದೇತರ ಸಂಗ? ದುಸ್ಸಂಗವಲ್ಲದೆ ಇಂತಪ್ಪ ದುಸ್ಸಂಗಿಗಳ ಸಂಗ ದೋಷಕ್ಕೆ ಈಡು ಮುಕ್ತಿಯ ಕೇಡು ಕಂಡೆಯಾ ಅಖಂಡೇಶ್ವರಾ.