Index   ವಚನ - 304    Search  
 
ತನ್ನ ತಾನರಿಯದೆ ಅನ್ಯರ ಗುಣಾವಗುಣಗಳ ಎತ್ತಿ ಎಣಿಸುವನ್ನಕ್ಕ ಶಿವಶರಣನೆಂತಪ್ಪನಯ್ಯ? ಸಜ್ಜನ ಸದ್ಭಾವಿ ಸತ್ಪುರುಷರುಗಳ ಮನನೋವಂತೆ ಹಳಿದು ಹಾಸ್ಯವ ಮಾಡಿ ದೂಷಿಸುವನ್ನಕ್ಕ ಶಿವಶರಣನೆಂತಪ್ಪನಯ್ಯ? ಗರ್ವಾಹಂಕಾರವೆಂಬ ಹಿರಿಯ ಪರ್ವತವನೇರಿ ಮರವೆಯಿಂದ ಮುಂದುಗಾಣದ ಮನದ ಪ್ರಪಂಚಿನಲ್ಲಿ ನಡೆದು ಜನನ ಮರಣಂಗಳೆಂಬ ಭವಜಾಲದಲ್ಲಿ ಸಿಲ್ಕಿ ದುಃಖವ ಪಡುವನ್ನಕ್ಕ ಶಿವಶರಣನೆಂತಪ್ಪನಯ್ಯ ಅಖಂಡೇಶ್ವರಾ.