Index   ವಚನ - 305    Search  
 
ತನ್ನ ಎಡೆಯಲ್ಲಿ ಕತ್ತೆ ಸತ್ತುಬಿದ್ದುದನರಿಯದೆ ಪರರೆಡೆಯಲ್ಲಿ ನೊಣವನರಸುವ ಮರುಳಮಾನವನಂತೆ, ತನ್ನಂಗಮನದ ಅವಗುಣಂಗಳ ತೊಲಗಿ ನೂಕಲರಿಯದೆ ಅನ್ಯರಲ್ಲಿ ಅವಗುಣವ ಸಂಪಾದನೆಯ ಮಾಡುವ ಕುನ್ನಿಗಳ ಎನಗೊಮ್ಮೆ ತೋರದಿರಯ್ಯ ಅಖಂಡೇಶ್ವರಾ.