Index   ವಚನ - 322    Search  
 
ಕುಚಿತ್ತವಳಿದು ಸುಚಿತ್ತ ನೆಲೆಗೊಂಡು ಆಚಾರಲಿಂಗದಲ್ಲಿ ಅವಿರಳ ಸಮರಸೈಕ್ಯವನರಿಯಬಲ್ಲಡೆ ಭಕ್ತನೆಂಬೆನು. ಕುಬುದ್ಧಿಯಳಿದು ಸುಬುದ್ಧಿ ನೆಲೆಗೊಂಡು ಗುರುಲಿಂಗದಲ್ಲಿ ಅವಿರಳ ಸಮರಸೈಕ್ಯವನರಿಯಬಲ್ಲಡೆ ಮಹೇಶ್ವರನೆಂಬೆನು. ಅಹಂಕಾರವಳಿದು ನಿರಹಂಕಾರ ನೆಲೆಗೊಂಡು ಶಿವಲಿಂಗದಲ್ಲಿ ಅವಿರಳ ಸಮರಸೈಕ್ಯವನರಿಯಬಲ್ಲಡೆ ಪ್ರಸಾದಿಯೆಂಬೆನು. ಕುಮನವಳಿದು ಸುಮನ ನೆಲೆಗೊಂಡು ಜಂಗಮಲಿಂಗದಲ್ಲಿ ಅವಿರಳ ಸಮರಸೈಕ್ಯವನರಿಯಬಲ್ಲಡೆ ಪ್ರಾಣಲಿಂಗಿಯೆಂಬೆನು. ಅಜ್ಞಾನವಳಿದು ಸುಜ್ಞಾನ ನೆಲೆಗೊಂಡು ಪ್ರಸಾದಲಿಂಗದಲ್ಲಿ ಅವಿರಳ ಸಮರಸೈಕ್ಯವನರಿಯಬಲ್ಲಡೆ ಶರಣನೆಂಬೆನು. ದುರ್ಭಾವವಳಿದು ಸದ್ ಭಾವ ನೆಲೆಗೊಂಡು ಮಹಾಲಿಂಗದಲ್ಲಿ ಅವಿರಳ ಸಮರಸೈಕ್ಯವನರಿಯಬಲ್ಲಡೆ ನಿಜೈಕ್ಯನೆಂಬೆನು. ಇಂತೀ ಷಡ್ವಿಧಬ್ರಹ್ಮವನೊಡಗೂಡಿದ ಮಹಾಶರಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.