Index   ವಚನ - 325    Search  
 
ಇಷ್ಟಲಿಂಗದಲ್ಲಿ ತನುವ ಸವೆಯದೆ, ಪ್ರಾಣಲಿಂಗದಲ್ಲಿ ಮನವ ಸವೆಯದೆ, ಭಾವಲಿಂಗದಲ್ಲಿ ಧನವ ಸವೆಯದೆ, ಬರಿದೆ ನಾನು ಜಂಗಮ, ತಾನು ಜಂಗಮವೆಂದು ತಮ್ಮ ಅಗಮ್ಯವ ನುಡಿದುಕೊಂಡು ಭಕ್ತಿಯ ಮರೆದು ಯುಕ್ತಿಶೂನ್ಯರಾಗಿ ಮುಕ್ತಿಯ ಹೊಲಬು ತಪ್ಪಿ ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳ ಕಚ್ಚಿ ಮೂತ್ರದ ಕುಳಿಯೊಳು ಮುಳುಗಾಡುತಿರ್ಪ ಮೂಳ ಹೊಲೆಯರ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.