Index   ವಚನ - 326    Search  
 
ಜಡೆ ಬೋಳು ಲೋಚು ದಿಗಂಬರವನು ಅಳವಡಿಸಿಕೊಂಡು ನಟಿಸುವ ಅಣ್ಣಗಳಿರಾ. ನಿಮ್ಮ ಜಡೆಯಾವುದು, ಬೋಳಾವುದು? ಲೋಚವಾವುದು, ದಿಗಂಬರವಾವುದು? ಬಲ್ಲರೆ ಹೇಳಿರೋ, ಅರಿಯದಿರ್ದಡೆ ನೀವು ಕೇಳಿರೋ. ಭಕ್ತಿ ಜ್ಞಾನ ವೈರಾಗ್ಯದ ಪುಂಜವೇ ಜಡೆ. ತನುವಿನ ಆಸೆ ಮನದ ವಾಸನಾ ಧರ್ಮವಳಿದುದೇ ಬೋಳು. ಸಚರಾಚರ ಪ್ರಾಣಿಗಳ ಮೇಲಣ ಕರುಣವೇ ಲೋಚು. ಸೃಷ್ಟಿ ಸ್ಥಿತಿ ಪ್ರಳಯಂಗಳು ನಷ್ಟವಾದುದೇ ದಿಗಂಬರ. ಇಂತೀ ಭೇದವನರಿಯದೆ ತನುವಿನ ವ್ಯಸನ ಧರಿಸಿ ಮನದ ಪ್ರಕೃತಿಯಲ್ಲಿ ಹರಿದಾಡುವ ಬಿನುಗು ಜೀವಗಳ್ಳರ ಎನಗೊಮ್ಮೆ ತೋರದಿರಯ್ಯ ಅಖಂಡೇಶ್ವರಾ.