Index   ವಚನ - 327    Search  
 
ಷಡುವರ್ಗಂಗಳ ಸಡಲಿಸಿ ಒಡಲುಪಾಧಿಯನರುಹಿ, ಷಡುಸ್ಥಲದನುವನರಿದು, ಷಟ್ ಬ್ರಹ್ಮದ ಸಂಯೋಗವನರಿಯದೆ ಪೊಡವಿಯ ಪ್ರಪಂಚಿನಲ್ಲಿ ಸಿಲ್ಕಿ ಹೊಡೆದಾಡಿ ಹೊತ್ತುಗಳೆದು ಮಡಿದು ಹೋಗುವ ಕಡುಪಾತಕರ ವಿರಕ್ತರೆನ್ನಬಹುದೆ ಅಯ್ಯ ಅಖಂಡೇಶ್ವರಾ?