Index   ವಚನ - 338    Search  
 
ಒಲ್ಲೆನಯ್ಯ ಜಗದ ಹಂಗಿನ ಭೋಗೋಪಭೋಗವನು. ಅದೇನು ಕಾರಣವೆಂದೊಡೆ: ಹಿಂದೆ ಅರಿಯದೆ ಮರೆದು ಜಗದ ಭೋಗವನು ಆಸೆ ಮಾಡಿ, ಮರ್ತ್ಯಲೋಕದಲ್ಲಿ ಹುಟ್ಟಿ ನೊಂದು ಬೆಂದು ಕಂದಿ ಕುಂದಿದೆನಯ್ಯಾ. ಇದು ಕಾರಣ ಇನ್ನು ಮುಂದೆ ಬಯಸಿದೆನಾದಡೆ ಅಖಂಡೇಶ್ವರಾ, ನಿಮ್ಮಾಣೆ ನಿಮ್ಮ ಪ್ರಮಥರಾಣೆ.