Index   ವಚನ - 357    Search  
 
ಮಾಡಿದ ಮಾಟವ ಮರೆದೆನಯ್ಯ ನಿಮ್ಮೊಳಗೆ. ನೋಡಿದ ನೋಟವ ಮರೆದೆನಯ್ಯ ನಿಮ್ಮೊಳಗೆ. ಕೂಡಿದ ಕೂಟವ ಮರೆದನಯ್ಯ ನಿಮ್ಮೊಳಗೆ. ಕರ್ಪುರದಗಿರಿಯ ಉರಿ ಉಂಡಂತಾದೆನಯ್ಯ ನಿಮ್ಮೊಳಗೆ, ಅಖಂಡೇಶ್ವರಾ.