Index   ವಚನ - 359    Search  
 
ಲಿಂಗಕ್ಕೆ ಸಮರ್ಪಿಸಿದ ಸಕಲದ್ರವ್ಯಂಗಳನು ಲಿಂಗ ಸಹಿತವಾಗಿ ಭೋಗಿಸಬೇಕು. ಅನರ್ಪಿತವ ಮುಟ್ಟದಿರಬೇಕು. ಲಿಂಗದಲ್ಲಿ ಅತಿ ಸಾವಧಾನಭಕ್ತಿ ನೆಲೆಗೊಂಡಿರಬೇಕು. ಅದೆಂತೆಂದೊಡೆ: “ಲಿಂಗಾರ್ಪಿತಪ್ರಸಾದಸ್ಯ ಸುಭೋಗೀ ಲಿಂಗಸಹಿತಃ | ಅನರ್ಪಿತಪರಿತ್ಯಾಗೀ ಪ್ರಸಾದಿಸ್ಥಲಮುತ್ತಮಮ್ || ಎಂದುದಾಗಿ, ಇಂತಪ್ಪ ಪರಮಪ್ರಸಾದಿಗಳ ಶ್ರೀಚರಣಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.