Index   ವಚನ - 360    Search  
 
ಶಿವಶಿವಾ ಮಹಾಪ್ರಸಾದದ ಮಹಿಮೆಯನೇನೆಂಬೆನಯ್ಯ? ಕಿನ್ನರ ಕಿಂಪುರುಷರಿಗಗಣಿತವಾಗಿರ್ಪುದು ನೋಡಾ! ಹರಿಸುರಬ್ರಹ್ಮಾದಿಗಳಿಗೆ ಅಗೋಚರವಾಗಿರ್ಪುದು ನೋಡಾ! ಸಿದ್ದಸಾಧಕರಿಗೆ ಅಸಾಧ್ಯವಾಗಿರ್ಪುದು ನೋಡಾ! ದೇವ ದಾನವ ಮಾನವರಿಗೆ ಅಭೇದ್ಯವಾಗಿರ್ಪುದು ನೋಡಾ! ಅದೆಂತೆಂದೊಡೆ: ಶಿವರಹಸ್ಯೇ- “ಪ್ರಸಾದಂ ಗಿರಿಜಾದೇವಿ ಸಿದ್ದಕಿನ್ನರಗುಹ್ಯಕ | ವಿಷ್ಣು ಪ್ರಮುಖದೇವಾನಾಮಗ್ರಗಣ್ಯಮಗೋಚರಮ್ ||” ಎಂದುದಾಗಿ, ಇಂತಪ್ಪ ಪರಮಪ್ರಸಾದವೆ ನೀವೆಯಯ್ಯ ಅಖಂಡೇಶ್ವರಾ.