ನಂಬಿರೊ ನಂಬಿರೊ ಶಿವನ ಪಾದತೀರ್ಥದ
ಮಹಿಮಯ ತಿಳಿದು.
ನಂಬಿರೋ ನಂಬಿರೊ ಶಿವನ ಪ್ರಸಾದದ ಘನವ ತಿಳಿದು.
ಮುನ್ನ ಜಂಗಮದ ಪಾದಜಲ ಸೋಂಕಿದ ಸರ್ಪನು ಹೋಗಿ
ಕಳ್ಳನ ಕಾಲ ಕಚ್ಚಲು, ಆ ಕಳ್ಳಂಗೆ ಕೈವಲ್ಯಪದವಾಯಿತ್ತು ನೋಡಾ!
ಜಂಗಮಪ್ರಸಾದ ಸೋಂಕಿದ ಮೀನ ಹಿಡಿದುಕೊಂಡು ಹೋಗಿ
ಜಾಲಗಾರ ಭಕ್ಷಿಸಲು, ಆ ಜಾಲಗಾರಂಗೆ
ಶಿವಸಾಲೋಕ್ಯಪದವಾಯಿತ್ತು ನೋಡಾ!
ಅದೆಂತೆಂದೊಡೆ: ವಾತುಲಾಗಮೇ-
ಮಹೇಶ್ವರಪದೋಚ್ಛಿಷ್ಟಂ ಜಲಬಿಂದುಸಮನ್ವಿತಮ್ |
ಮಾರುತಂ ಭುಂಜತೇ ಸರ್ಪಶ್ಚೋರೋ ದಷ್ಟಸ್ತು ಮುಕ್ತವಾನ್ ||
ಜಂಗಮಸ್ಯ ಪ್ರಸಾದೇನ ಮತ್ಸ್ಯಭಕ್ಷಸ್ತುಧೀವರಃ|
ಅಹೋ ಯಾತಿ ಚ ಕೈವಲ್ಯಂ ಪುನರ್ಜನ್ಮ ನ ವಿದ್ಯತೇ ||
ಎಂದುದಾಗಿ,
ಇಂತಪ್ಪ ಪಾದತೀರ್ಥ ಪ್ರಸಾದವನು ನಂಬಿ ಕೊಂಡರೆ
ಶಂಭುವಿನ ಕೈಲಾಸ ಕರತಳಾಮಳಕ ನೋಡಾ
ಅಖಂಡೇಶ್ವರಾ.
Art
Manuscript
Music
Courtesy:
Transliteration
Nambiro nambiro śivana pādatīrthada
mahimaya tiḷidu.
Nambirō nambiro śivana prasādada ghanava tiḷidu.
Munna jaṅgamada pādajala sōṅkida sarpanu hōgi
kaḷḷana kāla kaccalu, ā kaḷḷaṅge kaivalyapadavāyittu nōḍā!
Jaṅgamaprasāda sōṅkida mīna hiḍidukoṇḍu hōgi
jālagāra bhakṣisalu, ā jālagāraṅge
śivasālōkyapadavāyittu nōḍā!
Adentendoḍe: Vātulāgamē-
mahēśvarapadōcchiṣṭaṁ jalabindusamanvitam |
Mārutaṁ bhun̄jatē sarpaścōrō daṣṭastu muktavān ||
jaṅgamasya prasādēna matsyabhakṣastudhīvaraḥ|
ahō yāti ca kaivalyaṁ punarjanma na vidyatē ||
endudāgi,
intappa pādatīrtha prasādavanu nambi koṇḍare
śambhuvina kailāsa karataḷāmaḷaka nōḍā
akhaṇḍēśvarā.