Index   ವಚನ - 362    Search  
 
ಸಪ್ತಸಾಗರದಷ್ಟು ಪಾದೋದಕವ ವಿಶ್ವಾಸವಿಲ್ಲದೆ ಕೊಳ್ಳಲೇತಕೊ? ವಿಶ್ವಾಸದಿಂದ ತೃಣದ ತುದಿಯ ಉದಕದಷ್ಟು ಕೊಂಡಡೆ ಸಾಲದೆ? ಸಪ್ತಪರ್ವತದಷ್ಟು ಪ್ರಸಾದವ ಆತ್ಮವಿಶ್ವಾಸವಿಲ್ಲದೆ ಕೊಳ್ಳಲೇತಕೊ? ವಿಶ್ವಾಸದಿಂದೆ ಎಳ್ಳಿನ ಹದಿನಾರು ಭಾಗದೊಳಗೊಂದು ಭಾಗವ ಕೊಂಡಡೆ ಸಾಲದೆ? ಅದೆಂತೆಂದೊಡೆ: ತಿಲಷೋಡಶಭಾಗಸ್ಯ ತೃಣಾಗ್ರಾಂಬುಕಣೋಪಮಂ || ಪಾದೋದಕಪ್ರಸಾದಸ್ಯ ಸೇವನಾತ್‌ ಮೋಕ್ಷಮಾಪ್ನುಯಾತ್ || ಎಂದುದಾಗಿ, ವಿಶ್ವಾಸದಿಂದೆ ಕೊಂಡಡೆ ಈಶ್ವರ ತಾನೇ ನೋಡಾ ಅಖಂಡೇಶ್ವರಾ.