ಫಲಪದ ಮುಕ್ತಿಯ ಬಯಸಿ ಯುಕ್ತಿಗೆಟ್ಟು
ಸಕಲ ತೀರ್ಥಕ್ಷೇತ್ರಂಗಳಿಗೆ ಎಡೆಮಾಡಿ
ತೊಟ್ಟನೆ ತೊಳಲಿ ಬಳಲಿ ಬೆಂಡಾಗಲೇತಕೋ?
ಆ ಸಕಲ ತೀರ್ಥಕ್ಷೇತ್ರಂಗಳಲ್ಲಿ ಒದಗುವ ಮುಕ್ತಿಫಲಪದಂಗಳು
ಒಬ್ಬ ಪರಮ ಜಂಗಮದ ತೀರ್ಥ ಪ್ರಸಾದವಕೊಂಡ
ನಿಮಿಷಮಾತ್ರದಲ್ಲಿ ದೊರೆಕೊಂಬುದು ಹುಸಿಯಲ್ಲ ನೋಡಾ!
ಅದೆಂತೆಂದೊಡೆ:
ಪಾದತೀರ್ಥೇ ಸರ್ವತೀರ್ಥಾನಿ ಪ್ರಸಾದೇ ಕೋಟಿಲಿಂಗಕಂ |
ನಿತ್ಯಂ ಸೇವಿತಭಕ್ತಾನಾಂ ಮಮ ರೂಪಂ ತು ಪಾರ್ವತಿ ||
ಎಂದುದಾಗಿ,
ಇಂತಪ್ಪ ಪಾದತೀರ್ಥಪ್ರಸಾದವನು
ಸದಾ ಸನ್ನಿಹಿತನಾಗಿ ಕೊಂಬ ಸದ್ ಭಕ್ತನು
ಸಾಕ್ಷಾತ್ ಪರಶಿವಬ್ರಹ್ಮ ತಾನೆ ನೋಡಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Phalapada muktiya bayasi yuktigeṭṭu
sakala tīrthakṣētraṅgaḷige eḍemāḍi
toṭṭane toḷali baḷali beṇḍāgalētakō?
Ā sakala tīrthakṣētraṅgaḷalli odaguva muktiphalapadaṅgaḷu
obba parama jaṅgamada tīrtha prasādavakoṇḍa
nimiṣamātradalli dorekombudu husiyalla nōḍā!
Adentendoḍe:
Pādatīrthē sarvatīrthāni prasādē kōṭiliṅgakaṁ |
nityaṁ sēvitabhaktānāṁ mama rūpaṁ tu pārvati ||
endudāgi,
intappa pādatīrthaprasādavanu
sadā sannihitanāgi komba sad bhaktanu
sākṣāt paraśivabrahma tāne nōḍā akhaṇḍēśvarā.