ಗುರುಪ್ರಸಾದಿಯಾದಡೆ,
ಗುರುಭಕ್ತಿಯಿಂದೆ ಗುರುವಿಂಗೆ ತನುವ ಸಮರ್ಪಿಸಬೇಕು.
ಲಿಂಗಪ್ರಸಾದಿಯಾದಡೆ,
ಲಿಂಗಭಕ್ತಿಯಿಂದೆ ಲಿಂಗಕ್ಕೆ ಮನವ ಸಮರ್ಪಿಸಬೇಕು.
ಜಂಗಮಪ್ರಸಾದಿಯಾದಡೆ,
ಜಂಗಮಭಕ್ತಿಯಿಂದೆ ಜಂಗಮಕ್ಕೆ ಧನವ ಸಮರ್ಪಿಸಬೇಕು.
ಇಂತೀ ತ್ರಿವಿಧ ಭಕ್ತಿಯಿಲ್ಲದೆ.
ಕಂಡವರ ಕಂಡು ಕೈವೊಡ್ಡಿ ಇಕ್ಕಿಸಿಕೊಂಡು
ಅವಿಶ್ವಾಸದಿಂದೆ ಕೊಂಡಡೆ
ಅದು ಕೆಂಡದಂತಿರ್ಪುದಯ್ಯಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Guruprasādiyādaḍe,
gurubhaktiyinde guruviṅge tanuva samarpisabēku.
Liṅgaprasādiyādaḍe,
liṅgabhaktiyinde liṅgakke manava samarpisabēku.
Jaṅgamaprasādiyādaḍe,
jaṅgamabhaktiyinde jaṅgamakke dhanava samarpisabēku.
Intī trividha bhaktiyillade.
Kaṇḍavara kaṇḍu kaivoḍḍi ikkisikoṇḍu
aviśvāsadinde koṇḍaḍe
adu keṇḍadantirpudayyā akhaṇḍēśvarā.