Index   ವಚನ - 368    Search  
 
ಗುರುಪ್ರಸಾದವ ಕೊಂಬ ನೇಮವಿರ್ದ ಬಳಿಕ, ಗುರುನಿಂದೆಯ ಕೇಳಲಾಗದು. ಲಿಂಗಪ್ರಸಾದವ ಕೊಂಬ ನೇಮವಿರ್ದ ಬಳಿಕ, ಲಿಂಗನಿಂದೆಯ ಕೇಳಲಾಗದು. ಜಂಗಮಪ್ರಸಾದವ ಕೊಂಬ ನೇಮವಿರ್ದ ಬಳಿಕ, ಜಂಗಮನಿಂದೆಯ ಕೇಳಲಾಗದು. ಇಂತೀ ನೇಮವುಳ್ಳ ಸದ್ ಭಕ್ತನು ಅನ್ಯರಿಂದ ಬಂದ ಕುಂದು ನಿಂದ್ಯವ ಕೇಳಿ ಸುಮ್ಮನಿರ್ದಡೆ ತಾನು ಹಿಂದೆ ಕೊಂಡ ಪ್ರಸಾದವೆಲ್ಲ ಕಾಳಕೂಟವಿಷವ ಕೊಂಡಂತಾಯಿತ್ತು ಕಾಣಾ ಅಖಂಡೇಶ್ವರಾ.