Index   ವಚನ - 369    Search  
 
ನೇಮವಿರಬೇಕು ಗುರುಪ್ರಸಾದವಲ್ಲದೆ ಅನ್ಯವ ಮುಟ್ಟೆನೆಂಬ. ನೇಮವಿರಬೇಕು ಲಿಂಗಪ್ರಸಾದವಲ್ಲದೆ ಅನ್ಯವ ಮುಟ್ಟೆನೆಂಬ, ನೇಮವಿರಬೇಕು ಜಂಗಮಪ್ರಸಾದವಲ್ಲದೆ ಅನ್ಯವ ಮುಟ್ಟೆನೆಂಬ, ಇಂತೀ ನೇಮವುಳ್ಳ ಭಕ್ತಂಗೆ ಗುರುವುಂಟು, ಲಿಂಗವುಂಟು, ಜಂಗಮವುಂಟು, ಪಾದೋದಕ ಪ್ರಸಾದವುಂಟು, ಭಕ್ತಿಯುಂಟು, ಮುಕ್ತಿಯುಂಟು. ಇಂತೀ ನೇಮದ ಕಟ್ಟಳೆಯಿಲ್ಲದೆ ಬಾಯಿಗೆ ಬಂದಂತೆ ಪರಿಣಾಮಿಸುವಾತಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕಪ್ರಸಾದವಿಲ್ಲ, ಭಕ್ತಿಯಿಲ್ಲ, ಮುಕ್ತಿಯು ಮುನ್ನವೇ ಇಲ್ಲ ನೋಡಾ ಅಖಂಡೇಶ್ವರಾ.