Index   ವಚನ - 370    Search  
 
ಕಾಯದ ಕೈಮುಟ್ಟಿ ಇಷ್ಟಲಿಂಗಕ್ಕೆ ರೂಪವನರ್ಪಿಸಿದಲ್ಲಿ ಶುದ್ಧಪ್ರಸಾದವೆನಿಸಿತ್ತು. ಮನದ ಕೈಮುಟ್ಟಿ ಪ್ರಾಣಲಿಂಗಕ್ಕೆ ರುಚಿಯನರ್ಪಿಸಿದಲ್ಲಿ ಸಿದ್ಧಪ್ರಸಾದವೆನಿಸಿತ್ತು. ಭಾವದ ಕೈಮುಟ್ಟಿ ಭಾವಲಿಂಗಕ್ಕೆ ತೃಪ್ತಿಯನರ್ಪಿಸಿದಲ್ಲಿ ಪ್ರಸಿದ್ದಪ್ರಸಾದವೆನಿಸಿತ್ತು. ಇಂತೀ ಶುದ್ದ ಸಿದ್ಧ ಪ್ರಸಿದ್ದ ಪ್ರಸಾದಗ್ರಾಹಕರ ತೋರಿ, ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.