Index   ವಚನ - 417    Search  
 
ನಿಮ್ಮ ಪ್ರಸಾದವೆನಗೆ ತನುವಾಯಿತ್ತು. ನಿಮ್ಮ ಪ್ರಸಾದವೆನಗೆ ಮನವಾಯಿತ್ತು. ನಿಮ್ಮ ಪ್ರಸಾದವೆನಗೆ ಪ್ರಾಣವಾಯಿತ್ತು. ನಿಮ್ಮ ಪ್ರಸಾದವೆನಗೆ ಜೀವವಾಯಿತ್ತು. ನಿಮ್ಮ ಪ್ರಸಾದವೆನಗೆ ಕರಣೇಂದ್ರಿಯ ವಿಷಯಂಗಳಾದವು. ಇದು ಕಾರಣ, ಅಖಂಡೇಶ್ವರಾ, ನಿಮ್ಮ ಮಹಾಪ್ರಸಾದದ ನಿಲುವಿನೊಳಗೆ ಎರಡಳಿದು ಪರಮಸುಖಿಯಾಗಿರ್ದೆನಯ್ಯಾ.