Index   ವಚನ - 418    Search  
 
ಎನ್ನ ನೇತ್ರವು ನಿಮ್ಮ ಪ್ರಸಾದವನೆ ನೋಡುತಿರ್ಪುದು. ಎನ್ನ ಶ್ರೋತ್ರವು ನಿಮ್ಮ ಪ್ರಸಾದವನೆ ಕೇಳುತಿರ್ಪುದಯ್ಯ. ಎನ್ನ ನಾಸಿಕವು ನಿಮ್ಮ ಪ್ರಸಾದವನೆ ವಾಸಿಸುತಿರ್ಪುದು. ಎನ್ನ ಜಿಹ್ವೆಯು ನಿಮ್ಮ ಪ್ರಸಾದವನೆ ಪಾಡುತಿರ್ಪುದು. ಎನ್ನ ತ್ವಚೆಯು ನಿಮ್ಮ ಪ್ರಸಾದವನೆ ಸ್ಪರ್ಶಿಸುತಿರ್ಪುದು. ಎನ್ನ ಸರ್ವಾಂಗವು ನಿಮ್ಮ ಪ್ರಸಾದವನೆ ಸ್ಪರ್ಶಿಸುತಿರ್ಪುದು. ಅಖಂಡೇಶ್ವರಾ.