Index   ವಚನ - 488    Search  
 
ಈ ಹಠಯೋಗಕ್ಕೆ ನಿಜದಂಗವಾಗಿರ್ಪ ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಗಳೆಂಬ ಅಷ್ಟಾಂಗಯೋಗದೊಳಗೆ ಮೊದಲು ಯಮಯೋಗದ ಲಕ್ಷಣವೆಂತೆಂದೊಡೆ: ಪರಸ್ತ್ರೀಯರ ಸಂಗವಿರಹಿತವಾಗಿಹುದು. ಪರದ್ರವ್ಯವನಪಹರಿಸದಿಹುದು. ಪರಹಿಂಸೆಯ ಮಾಡದಿಹುದು. ದುಃಖಿತರಿಗೆ ಹಿತವ ಚಿಂತಿಸುವುದು. ಶೋಕಭೀತಿಗಳಿಲ್ಲದಿಹುದು, ಅಲ್ಪಾಹಾರಿಯಾಗಿಹುದು. ಕುಟಿಲತೆಯಿಲ್ಲದಿಹುದು, ಕಾರ್ಪಣ್ಯವಿಲ್ಲದಿಹುದು. ಸತ್ಯವಚನವ ನುಡಿವುದು. ಜಲಸ್ನಾನ ಭಸ್ಮಸ್ನಾನಾದಿಗಳನಾಚರಿಸುವುದು. ಯಮಯೋಗವೆನಿಸುವುದಯ್ಯಾ ಅಖಂಡೇಶ್ವರಾ.