ಮಾತಿನಲ್ಲಿ ಶುದ್ಧವಿಲ್ಲದವರು ಶರಣರೆ?
ಮನದಲ್ಲಿ ನಿಜವಿಲ್ಲದವರು ಶರಣರೆ?
ಇಂದ್ರಿಯಂಗಳಿಗೆ ಮೈಗೊಡುವವರು ಶರಣರೆ?
ವಿಷಯಕ್ಕೆ ಮುಂದುವರಿವವರು ಶರಣರೆ? ಅಲ್ಲಲ್ಲ,
ಹಿಂದಣ ಮರವೆ ಮುಂದಣ ಎಚ್ಚರಿಕೆಯನರಿತು
ಜಾಗ್ರ ಸ್ವಪ್ನ ಸುಷುಪ್ತಿಯ ಹರಿದು,
ನಿರಾಳಲಿಂಗದಲ್ಲಿ ನಿಂದಾತ ಶರಣನಲ್ಲದೆ,
ಬಣ್ಣಗಾರ ಬಾಯಬಡುಕ
ಭವದುಃಖಿಗಳ ಶರಣರೆಂದಡೆ
ನಗುವರಯ್ಯಾ ನಿಮ್ಮ ಶರಣರು ಅಖಂಡೇಶ್ವರಾ.
Art
Manuscript
Music
Courtesy:
Transliteration
Mātinalli śud'dhavilladavaru śaraṇare?
Manadalli nijavilladavaru śaraṇare?
Indriyaṅgaḷige maigoḍuvavaru śaraṇare?
Viṣayakke munduvarivavaru śaraṇare? Allalla,
hindaṇa marave mundaṇa eccarikeyanaritu
jāgra svapna suṣuptiya haridu,
nirāḷaliṅgadalli nindāta śaraṇanallade,
baṇṇagāra bāyabaḍuka
bhavaduḥkhigaḷa śaraṇarendaḍe
naguvarayyā nim'ma śaraṇaru akhaṇḍēśvarā.