ಸತ್ತು ಹೋಗುವರೆಲ್ಲ ಸ್ವರ್ಗಪದಸ್ಥರೆ? ಅಲ್ಲಲ್ಲ.
ಕೈದುವ ಪಿಡಿವರೆಲ್ಲ ಮಹಾಕಲಿಗಳೆ? ಅಲ್ಲಲ್ಲ.
ಲಿಂಗವ ಧರಿಸುವರೆಲ್ಲ ಲಿಂಗಪ್ರಾಣಿಗಳೆ? ಅಲ್ಲಲ್ಲ.
ಅದೇನು ಕಾರಣವೆಂದಡೆ:
ಕಪಿಯ ಕೈಯಲ್ಲಿ ರತ್ನವ ಕೊಟ್ಟಡೆ
ಅದು ಹಣ್ಣೆಂದು ಕಡಿದು ನೋಡಿ
ಕಲ್ಲೆಂದು ಬಿಸುಟುವುದಲ್ಲದೆ,
ಆ ರತ್ನದ ದಿವ್ಯಬೆಳಗನರಿವುದೆ ಅಯ್ಯಾ?
ಇಂತೀ ದೃಷ್ಟದಂತೆ
ಮಡ್ಡಜೀವಿಗಳ ಕೈಯಲ್ಲಿ ದೊಡ್ಡಲಿಂಗವಿರ್ದಡೇನು?
ಆ ಲಿಂಗದಲ್ಲಿ ಮಹಾಘನ ಪರಮಕಳೆಯನರಿಯದ ಬಳಿಕ
ಅದು ಒಡ್ಡುಗಲ್ಲಿನಂತೆ ಕಂಡೆಯಾ ಅಖಂಡೇಶ್ವರಾ?
Art
Manuscript
Music
Courtesy:
Transliteration
Sattu hōguvarella svargapadasthare? Allalla.
Kaiduva piḍivarella mahākaligaḷe? Allalla.
Liṅgava dharisuvarella liṅgaprāṇigaḷe? Allalla.
Adēnu kāraṇavendaḍe:
Kapiya kaiyalli ratnava koṭṭaḍe
adu haṇṇendu kaḍidu nōḍi
kallendu bisuṭuvudallade,
ā ratnada divyabeḷaganarivude ayyā?
Intī dr̥ṣṭadante
maḍḍajīvigaḷa kaiyalli doḍḍaliṅgavirdaḍēnu?
Ā liṅgadalli mahāghana paramakaḷeyanariyada baḷika
adu oḍḍugallinante kaṇḍeyā akhaṇḍēśvarā?