Index   ವಚನ - 563    Search  
 
ನೋಡಿರೆ ನೋಡಿರೆ ಒಂದು ವಿಚಿತ್ರವ. ಶಿಷ್ಯನೆಂಬ ಹೆಂಡತಿಯ ಶ್ರೀಗುರುವೆಂಬ ಗಂಡನು ಹಸ್ತಮಸ್ತಕಸಂಯೋಗವೆಂಬ ಕೂಟವ ಕೂಡಲು, ಜಿಹ್ವೆಯೆಂಬ ಮೇಢ್ರದಲ್ಲಿ ಷಡಕ್ಷರಮಂತ್ರವೆಂಬ ವೀರ್ಯವು ಚಲನೆಯಾಗಿ, ಆ ಶಿಷ್ಯನೆಂಬ ಹೆಂಡತಿಯ ಕರ್ಣವೆಂಬ ಗರ್ಭಪ್ರವೇಶವಾಗಲು, ಮನ ಬಸುರಾಗಿ, ಕಂಗಳೆಂಬ ಯೋನಿಯಲ್ಲಿ ಲಿಂಗವೆಂಬ ಮಗನ ಹಡೆದು, ಅಂಗೈಯೆಂಬ ತೊಟ್ಟಿಲಲ್ಲಿಕ್ಕಿ ಮಂಗಳಸ್ತೋತ್ರವೆಂಬ ಜೋಗುಳವ ಹಾಡಿ, ಅಖಂಡೇಶ್ವರನೆಂಬ ಹೆಸರಿಟ್ಟರು ನೋಡಾ! ಇದು ಕಾರಣ, ನೀವೀಗವೆನಗೆ ಮಗನಾದಿರಿ, ನಾ ನಿಮಗೆ ತಾಯಾದೆನಯ್ಯಾ ಅಖಂಡೇಶ್ವರಾ.