ಶ್ರೇಷ್ಠ ಶ್ರೀಗುರುಸ್ವಾಮಿ
ಇಷ್ಟಲಿಂಗವೆ ನಿನ್ನ ಪ್ರಾಣವೆಂದು ನಿರೂಪಿಸಿದನು.
ಆ ನಿರೂಪವನು ಮಹಾಪ್ರಸಾದವೆಂದು ಕೈಕೊಂಡು
ಇಷ್ಟಲಿಂಗದಲ್ಲಿ ನಿಷ್ಠೆ ನಿಬ್ಬೆರಗಾಗಿ ಆಚರಿಸುವಲ್ಲಿ
ಆ ಇಷ್ಟಲಿಂಗದ ಗೋಳಕವು
ತನ್ನ ಹಸ್ತದಿಂದಾದಡು ಪರಹಸ್ತದಿಂದಾದಡು
ಕಿತ್ತುಬಂದಡೆ, ಸಂದೇಹಗೊಳಲಾಗದು.
ಮರಳಿ ಮುನ್ನಿನಂತೆ ಧರಿಸಿಕೊಂಬುವುದು.
ಇದು ನಿರಾಳದ ಅಚ್ಚು, ವೀರಶೈವದ ಗಚ್ಚು,
ಪುರಾತನರ ಮಚ್ಚು, ಸರ್ವಗಣಂಗಳಿಗೆ ಸಮ್ಮತ.
ಅದೆಂತೆಂದೊಡೆ;
ವಿಯೋಗೇ ಶಿವಭಕ್ತಶ್ಚ ಶಂಕಾ ವೀರಶೈವಿನಾಂ |
ಪುನರ್ಬಂಧಂ ತಥಾ ಕೃತ್ವಾ ತಲ್ಲಿಂಗಂ ಧಾರಯೇತ್ ಸುಧೀಃ ||
ಹಸ್ತೇನ ಲಿಂಗಮುತ್ಪಾತಂ ಪುನರ್ಬಂಧೇನ ಧಾರಯೇತ್ |
ಸಂದೇಹೋ ನಾಸ್ತಿ ವೀರಾಣಾಮಿತ್ಯಾಹ ಪರಮೇಶ್ವರಃ ||''
-ಭೀಮಾಗದಲ್ಲಿ ಪರಮೇಶ್ವರನ ವಾಕ್ಯ. -
ಇಂತಪ್ಪ ಶಿವನ ವಾಕ್ಯವನು ಮೀರಿ
ಸಂದೇಹಗೊಂಡು ಸಾಯಬೇಕೆಂಬ ಸೂತಕಮನದ
ಪಾತಕ ಹೊಲೆಯರ ಮುಖವ ನೋಡಲಾಗದಯ್ಯ
ಅಖಂಡೇಶ್ವರಾ.
Art
Manuscript
Music
Courtesy:
Transliteration
Śrēṣṭha śrīgurusvāmi
iṣṭaliṅgave ninna prāṇavendu nirūpisidanu.
Ā nirūpavanu mahāprasādavendu kaikoṇḍu
iṣṭaliṅgadalli niṣṭhe nibberagāgi ācarisuvalli
ā iṣṭaliṅgada gōḷakavu
tanna hastadindādaḍu parahastadindādaḍu
kittubandaḍe, sandēhagoḷalāgadu.
Maraḷi munninante dharisikombuvudu.
Idu nirāḷada accu, vīraśaivada gaccu,
purātanara maccu, sarvagaṇaṅgaḷige sam'mata.
Adentendoḍe;
Viyōgē śivabhaktaśca śaṅkā vīraśaivināṁ |
punarbandhaṁ tathā kr̥tvā talliṅgaṁ dhārayēt sudhīḥ ||
hastēna liṅgamutpātaṁ punarbandhēna dhārayēt |
sandēhō nāsti vīrāṇāmityāha paramēśvaraḥ ||''
-bhīmāgadalli paramēśvarana vākya. -
Intappa śivana vākyavanu mīri
sandēhagoṇḍu sāyabēkemba sūtakamanada
pātaka holeyara mukhava nōḍalāgadayya
akhaṇḍēśvarā.