ಶ್ರೀಗುರು ಕರುಣಿಸಿ ಕರಸ್ಥಲಕ್ಕೆ ಕೊಟ್ಟ ಇಷ್ಟಲಿಂಗವನು
ಶುದ್ಧಸಾವಧಾನದಿಂದೆ ಧರಿಸಿಕೊಂಡು,
ಆ ಲಿಂಗವೆ ಪತಿ ತಾನೆ ಸತಿ ಎಂಬ
ಭಾವದಿಂದೆ ಆಚರಿಸುವ ಕಾಲದಲ್ಲಿ
ಆ ಲಿಂಗವು ಮೋಸದಿಂದೋಸರಿಸಿ ಹೋದಡೆ
ಅರಸಿ ನೋಡಿಕೊಂಡು,
ಸಿಕ್ಕಿದಲ್ಲಿ ಸೂಕ್ಷ್ಮ ವಿಚಾರವ ತಿಳಿದು
ಮುನ್ನಿನಂತೆ ಧರಿಸಿಕೊಂಬುವುದು.
ಮತ್ತಾ ಲಿಂಗವು
ವೃತ್ತ ಕಟಿ ವರ್ತುಳ ಗೋಮುಖ ನಾಳ ಗೋಳಕ ಎಂಬ
ಷಟ್‍ಸ್ಥಾನಂಗಳಲ್ಲಿ ಭಿನ್ನವಾದಡೆಯೂ
ಕಣ್ಣಿಗೆ ಕಾಣಿಸಿಕೊಳ್ಳದೆ ಹೋದಡೆಯೂ
ಲಿಂಗಕ್ಕೆ ತನ್ನ ಪ್ರಾಣವನು ತ್ಯಾಗಮಾಡಬೇಕಲ್ಲದೆ,
ಅಲ್ಲಿ ಹಿಂದು ಮುಂದು ನೋಡಲಾಗದು.
ಇದಕ್ಕೆ ಶಿವನ ವಾಕ್ಯವೆ ಸಾಕ್ಷಿ:
ಗುರುಣಾ ದತ್ತಲಿಂಗಂ ತು ಸಾವಧಾನೇನ ಧಾರಯೇತ್ |
ಪ್ರಮಾದಾತ್ಪತಿತೇ ಲಿಂಗೇ ಪ್ರಾಣಾನಪಿ ಪರಿತ್ಯಜೇತ್ ||
ವೃತ್ತನಾಲಸಮಂ ಪೀಠಂ ಗೋಲಕಂ ಮಧ್ಯಗೋಮುಖಂ |
ಭಿನ್ನಂ ಷಡ್ವಿಧಸ್ಥಾನೇನ ಪ್ರಾಣಾಂ ಸ್ತ್ಯಕ್ತ್ವಾ ಶಿವಂ ವ್ರಜೇತ್ ||''
-ಸಿದ್ಧಾಂತ ಶಿಖಾಮಣಿ
ಇಂತಪ್ಪ ಲಿಂಗೈಕ್ಯವಾದ ಶರಣರ
ನೀನೆಂದೇ ಕಾಂಬೆನಯ್ಯಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Śrīguru karuṇisi karasthalakke koṭṭa iṣṭaliṅgavanu
śud'dhasāvadhānadinde dharisikoṇḍu,
ā liṅgave pati tāne sati emba
bhāvadinde ācarisuva kāladalli
ā liṅgavu mōsadindōsarisi hōdaḍe
arasi nōḍikoṇḍu,
sikkidalli sūkṣma vicārava tiḷidu
munninante dharisikombuvudu.
Mattā liṅgavu
vr̥tta kaṭi vartuḷa gōmukha nāḷa gōḷaka emba
ṣaṭsthānaṅgaḷalli bhinnavādaḍeyū
kaṇṇige kāṇisikoḷḷade hōdaḍeyū
Liṅgakke tanna prāṇavanu tyāgamāḍabēkallade,
alli hindu mundu nōḍalāgadu.
Idakke śivana vākyave sākṣi:
Guruṇā dattaliṅgaṁ tu sāvadhānēna dhārayēt |
pramādātpatitē liṅgē prāṇānapi parityajēt ||
vr̥ttanālasamaṁ pīṭhaṁ gōlakaṁ madhyagōmukhaṁ |
bhinnaṁ ṣaḍvidhasthānēna prāṇāṁ styaktvā śivaṁ vrajēt ||''
-sid'dhānta śikhāmaṇi
intappa liṅgaikyavāda śaraṇara
nīnendē kāmbenayyā akhaṇḍēśvarā.