Index   ವಚನ - 610    Search  
 
ಶಿವನೆ ಗುರುವೆಂದು ಗುರುವಿಂಗೆ ತನುವನರ್ಪಿಸಿ, ಶಿವನೆ ಲಿಂಗವೆಂದು ಲಿಂಗಕ್ಕೆ ಮನವನರ್ಪಿಸಿ, ಶಿವನೆ ಜಂಗಮವೆಂದು ಜಂಗಮಕ್ಕೆ ಧನವನರ್ಪಿಸಿ, ಆ ಗುರುಲಿಂಗಜಂಗಮದ ಘನಪ್ರಸಾದವ ಪಡೆದು ನಿಜಮುಕ್ತಿಯನೈದಲರಿಯದೆ, ನನ್ನ ಶೀಲ ಹೆಚ್ಚು ತನ್ನ ಶೀಲ ಹೆಚ್ಚೆಂದು ಕುಲಸೂತಕ ಛಲಸೂತಕದಿಂದೆ ಒಬ್ಬರನೊಬ್ಬರು ಹಳಿದಾಡುವ ದುಃಶೀಲವಂತರ ಮೆಚ್ಚುವನೆ ನಮ್ಮ ಅಖಂಡೇಶ್ವರ.