Index   ವಚನ - 617    Search  
 
ಗುರುಸ್ಥಲದ ಗಂಭೀರವಸ್ತುವ ಕೂಡಬಲ್ಲಡೆ ಗುರುಸ್ಥಲದವರೆಂಬೆನು. ಚರಸ್ಥಲದ ಚಿನ್ಮಯಶಿವನ ಕೂಡಬಲ್ಲಡೆ ಚರಸ್ಥಲದವರೆಂಬೆನು. ಪರಸ್ಥಲದ ಪರಾತ್ಪರ ಪರಬ್ರಹ್ಮವ ಕೂಡಬಲ್ಲಡೆ ಪರಸ್ಥಲದವರೆಂಬೆನು. ಇಂತೀ ಭೇದವನರಿಯದೆ ಹರನ ವೇಷವ ಧರಿಸಿ ನರನ ಓಲೈಸುವ ಬರಿ ಮೂರ್ಖರನೇನೆಂಬೆನಯ್ಯಾ ಅಖಂಡೇಶ್ವರಾ?