ಘನಲಿಂಗದೇವರು ಘನಲಿಂಗದೇವರೆಂದು
ನುಡಿದುಕೊಂಬ ಬಿನುಗು ಹೊಲೆಯರನೇನೆಂಬೆನಯ್ಯಾ!
ಹೊಟ್ಟೆಯಕಿಚ್ಚಿಗೆ ಒಟ್ಟಿದ ಬಣವೆಯ ಸುಟ್ಟಾತ
ಘನಲಿಂಗದೇವರೆ?
ಕೊಟ್ಟಾತ ಒಳಗು, ಕೊಡದಾತ ಹೊರಗೆಂದು
ಕಟ್ಟಿದಲಿಂಗವ ಮೆಟ್ಟಿ ಮೆಟ್ಟಿ ಹರಿವಾತ ಘನಲಿಂಗದೇವರೆ?
ಒಡೆಯನ ವೇಷವ ಧರಿಸಿ
ಒಡಲ ಕಿಚ್ಚಿಗೆ ತುಡುಗನಾಯಂತೆ
ಕಡಿದು ಕನ್ನವನಿಕ್ಕುವಾತ ಘನಲಿಂಗದೇವರೆ?
ಅಹುದಾದುದನಲ್ಲಮಾಡಿ ಅಲ್ಲವಾದುದ ಅಹುದುಮಾಡಿ
ಅಧರ್ಮ ಅನ್ಯಾಯದಲ್ಲಿ ಹೊಡೆದಾಡಿ
ಹೊಲಬುದಪ್ಪಿ ಮಡಿದುಹೋಗುವ
ಬಾಯಬಡಕ ಭ್ರಷ್ಟಮಾದಿಗರ ಘನಲಿಂಗದೇವರೆಂದಡೆ
ಅಘೋರನರಕ ತಪ್ಪದಯ್ಯಾ ಅಖಂಡೇಶ್ವರಾ?
Art
Manuscript
Music
Courtesy:
Transliteration
Ghanaliṅgadēvaru ghanaliṅgadēvarendu
nuḍidukomba binugu holeyaranēnembenayyā!
Hoṭṭeyakiccige oṭṭida baṇaveya suṭṭāta
ghanaliṅgadēvare?
Koṭṭāta oḷagu, koḍadāta horagendu
kaṭṭidaliṅgava meṭṭi meṭṭi harivāta ghanaliṅgadēvare?
Oḍeyana vēṣava dharisi
oḍala kiccige tuḍuganāyante
kaḍidu kannavanikkuvāta ghanaliṅgadēvare?
Ahudādudanallamāḍi allavāduda ahudumāḍi
adharma an'yāyadalli hoḍedāḍi
holabudappi maḍiduhōguva
bāyabaḍaka bhraṣṭamādigara ghanaliṅgadēvarendaḍe
aghōranaraka tappadayyā akhaṇḍēśvarā?