ಜನನವಿಲ್ಲದ ಶರಣ, ಮರಣವಿಲ್ಲದ ಶರಣ,
ಕಾಲನ ಬಾಧೆಗೆ ಹೊರಗಾದ ಶರಣ, ಕರ್ಮವಿರಹಿತ ಶರಣ,
ಮಾಯಾಮೋಹದ ಬೇರ ಕೊರೆದ ಶರಣ,
ಭವಜಾಲವ ಹರಿದ ಶರಣ,
ಅಖಂಡೇಶ್ವರಾ, ನಿಮ್ಮ ಶರಣನ ಮಹಿಮೆಯ
ನೀವೇ ಬಲ್ಲಿರಲ್ಲದೆ ಉಳಿದ
ಕೀಟಕಪ್ರಾಣಿಗಳೆತ್ತ ಬಲ್ಲರಯ್ಯಾ.
Art
Manuscript
Music
Courtesy:
Transliteration
Jananavillada śaraṇa, maraṇavillada śaraṇa,
kālana bādhege horagāda śaraṇa, karmavirahita śaraṇa,
māyāmōhada bēra koreda śaraṇa,
bhavajālava harida śaraṇa,
akhaṇḍēśvarā, nim'ma śaraṇana mahimeya
nīvē ballirallade uḷida
kīṭakaprāṇigaḷetta ballarayyā.