Index   ವಚನ - 636    Search  
 
ಶರಣನ ತನುವೆ ಕೈಲಾಸ ತಾನೆ ನೋಡಾ. ಶರಣನ ಮನವೆ ಸಾಕ್ಷಾತ್ ಪರಶಿವಲಿಂಗವು ತಾನೆ ನೋಡಾ. ಶರಣನ ಕರಣಂಗಳೆಲ್ಲ ಸಕಲಪ್ರಮಥಗಣಂಗಳು ತಾನೆ ನೋಡಾ. ನಮ್ಮ ಅಖಂಡೇಶ್ವರನ ಚಾರಿತ್ರದಲ್ಲಿ ಸುಳಿವ ಶರಣನ ಸುಳುಹೆಲ್ಲ ಜಗತ್‍ಪಾವನವು ತಾನೆ ನೋಡಾ.