Index   ವಚನ - 638    Search  
 
ಸಂದೇಹಿಸೂತಕಿಯಲ್ಲ ಶರಣ, ಬಂದಿತೊ ಬಾರದೊ ಎಂಬ ತಥ್ಯಮಿಥ್ಯ ರಾಗದ್ವೇಷಿಯಲ್ಲ ಶರಣ. ಸ್ತುತಿ ನಿಂದೆಗೆ ಹಿಗ್ಗಿ ಕುಗ್ಗುವನಲ್ಲ ಶರಣ. ಇದು ಕಾರಣ, ಅಖಂಡೇಶ್ವರಾ, ನಿಮ್ಮ ಶರಣನ ಪರಿ ಆವ ಲೋಕದೊಳಗೆ ಇಲ್ಲ ನೋಡಾ.