ಆದಿಯ ಸಂಗದಲಾದವನ ದೇವರೆಂದೆನ್ನೆ,
ಸಂಗ ಸುಖದಲಿಪ್ಪವನ ದೇವರೆಂದೆನ್ನೆ,
ಶಕ್ತಿ ಸಂಪುಟವಾದವನ ದೇವೆರೆಂದೆನ್ನೆ,
ಇಬ್ಬರ ಸಂಗದಲಾದವನ ದೇವರೆಂದೆನ್ನೆ,
ಭಾವ ಸದ್ಭಾವ ನಿರ್ಭಾವವೆಂಬ ಭಾವತ್ರಯವುಳ್ಳವನ ದೇವರೆಂದೆನ್ನೆ,
ಸಗುಣ ನಿರ್ಗುಣವುಳ್ಳವನ ದೇವರೆಂದೆನ್ನೆ,
ಸಗುಣ ನಿರ್ಗುಣಗಳಿಗೆ ಮಿಗೆಮಿಗೆಯಾಗಿ ತೋರುವ
ಪರಮಾವ್ಯಯ ನೀನಾದ ಕಾರಣ,
ನಿರವಯಲಿಂಗವೆಂದೆ; ನಿಃಕಲಪರಬ್ರಹ್ಮವೆಂದೆ,
ಏಕಮೇವನದ್ವಿತೀಯ ಪರಾತ್ಪರವೆಂದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Ādiya saṅgadalādavana dēvarendenne,
saṅga sukhadalippavana dēvarendenne,
śakti sampuṭavādavana dēverendenne,
ibbara saṅgadalādavana dēvarendenne,
bhāva sadbhāva nirbhāvavemba bhāvatrayavuḷḷavana dēvarendenne,
saguṇa nirguṇavuḷḷavana dēvarendenne,
saguṇa nirguṇagaḷige migemigeyāgi tōruva
paramāvyaya nīnāda kāraṇa,
niravayaliṅgavende; niḥkalaparabrahmavende,
ēkamēvanadvitīya parātparavendenu kāṇā,
mahāliṅgaguru śivasid'dhēśvara prabhuvē.