Index   ವಚನ - 141    Search  
 
ಮೆತ್ತಾನ ಅಶನವನುಂಡು, ಕೆಚ್ಚಾನ ಚರ್ಮವ ಕಚ್ಚಿಕೊಂಡು ಬೆಚ್ಚಾನ ಮನೆಯಲ್ಲಿ ಬಿದ್ದಿಪ್ಪವರಿಗೆ, ಅಚ್ಚುಗವೆ ಅನಂತ ಬಹುದುಃಖ? ಮೃತ್ಯುಂಜಯನನರಿಯದೆ ಸಂಸಾರವೆಂಬ ಮೃತ್ಯುವಿನ ಬಾಯತುತ್ತಾಗಿ ಉತ್ಪತ್ತಿ ಸ್ಥಿತಿ ಪ್ರಳಯಕೊಳಗಾದಿರಿಯಲ್ಲ? ನಿತ್ಯ ನಿರಂಜನ ಪರವಸ್ತುವ ಮಚ್ಚಲರಿಯದೆ, ವೃಥಾ ಕೆಟ್ಟಿತ್ತು ನೋಡಾ ತ್ರೈಜಗ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.