ಆಡಿನ ಶಿರದ ಮೇಲೆ ಕುಣಿದಾಡುವ ಕೋಡಗ
ಮಾರುತನ ಕೂಡೆ ಉಡುವ ಹಡೆಯಿತ್ತು ನೋಡಾ.
ಉಡುವಿನ ನಾಲಗೆಯಲ್ಲಿ ಅಜ ಹರಿ
ಸುರ ಮನು ಮುನಿಗಳು ಅಡಗಿದರು.
ಇವರೆಲ್ಲರ ಯಜನಾದಿ ಕೃತ್ಯಂಗಳು
ಉಡುವಿನ ಕಾಲಿನಲ್ಲಿ ಅಡಗಿದವು.
ತ್ರಿಜಗವೆಲ್ಲವು ಹೀಂಗೆ ಪ್ರಳಯದಲ್ಲಿ ಮುಳುಗಿದೆಯಲ್ಲ.
ಉಡುವಿನ ನಾಲಗೆ ಕೊಯಿದು,
ಕುಣಿದಾಡುವ ಕೋಡಗನ ಕಾಲಮುರಿದು, ಅಜಪಶುವ ಕೊಂದು,
ಅಗ್ನಿಯಲ್ಲಿ ಸುಟ್ಟು ಭಸ್ಮವ ಮಾಡಬಲ್ಲಾತನ
ಜನನಮರಣ ವಿರಹಿತನೆಂಬೆ,
ತ್ರಿಜಗಾಧಿಪತಿಗಳಿಗೆ ಒಡೆಯನೆಂಬೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Āḍina śirada mēle kuṇidāḍuva kōḍaga
mārutana kūḍe uḍuva haḍeyittu nōḍā.
Uḍuvina nālageyalli aja hari
sura manu munigaḷu aḍagidaru.
Ivarellara yajanādi kr̥tyaṅgaḷu
uḍuvina kālinalli aḍagidavu.
Trijagavellavu hīṅge praḷayadalli muḷugideyalla.
Uḍuvina nālage koyidu,
kuṇidāḍuva kōḍagana kālamuridu, ajapaśuva kondu,
agniyalli suṭṭu bhasmava māḍaballātana
jananamaraṇa virahitanembe,
trijagādhipatigaḷige oḍeyanembe,
mahāliṅgaguru śivasid'dhēśvara prabhuvē.