Index   ವಚನ - 166    Search  
 
ಗುರುವನು ಮಹಾದೇವನನು ಒಂದೇಯೆಂದು ಭಾವಿಸಲು ಬೇಕು ನೋಡಾ. ಎರಡೆಂಬ ಪ್ರತಿಭಾವ ತೋರಿದಡೆ, ಅದು ಅಜ್ಞಾನ ನೋಡಾ. ಇದು ಕಾರಣ ಅವನಾನೊರ್ವನು ಎರಡೆಂದು ಭಾವಿದನಾದಡೆ, ಅನೇಕಕಾಲ ನರಕದ ಕುಣಿಯಲ್ಲಿಪ್ಪುದು ತಪ್ಪದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.