Index   ವಚನ - 187    Search  
 
ಇದು ಕಾರಣ, ಸರ್ವಾಂಗೋದ್ಧೂಳನವೆ ಅಧಿಕ ನೋಡಾ. ಆತನ ರೋಮ ರೋಮಂಗಳೆಲ್ಲವು ಲಿಂಗಮಯ ನೋಡಾ. ಆತನು ಪವಿತ್ರಕಾಯನು ನೋಡಾ. ಆತನು ಸ್ವಯಂ ಜ್ಯೋತಿಸ್ವರೂಪನು ನೋಡಾ. ಆತನು ಶುದ್ಧ ನಿರ್ಮಲನು ನೋಡಾ. ಆ ಪರಶಿವಸ್ವರೂಪಂಗೆ ನಮೋ ನಮೋ ಎಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.