ಬಾಯಿ ಉಂಡು, ನಾಸಿಕ ವಾಸಿಸಿ, ಕಣ್ಣು ಕಂಡು, ಕಿವಿ ಕೇಳಿ,
ಕೈ ಮುಟ್ಟಿನೋಡಿ ಅರ್ಪಿಸುವಾಗ ನಿನಗಲ್ಲಿಯೇ ತೃಪ್ತಿಯೇ?
ನೀ ತತ್ತುಗೈಯ ಇಕ್ಕಿನ ಕೂಳವನೆ?
ಎಲ್ಲರ ಮನಸ್ಸು ಪರಕೈಯಿಂದ ಪರೀಕ್ಷಿಸಿಕೊಂಬವನೆ?
ಎಲ್ಲರಲ್ಲಿ ಅರಿಕೆ ತನ್ಮಯ ನೀನೆಂಬುದನರಿಯದೆ.
ಕಾಲ ಮುಳ್ಳು ಕೈಯಿಂದ ಕಳೆವಂತೆ, ಅದಾರಿಗೆ ಲೇಸು ಹೇಳಾ?
ಇದರ ಆಗ ಕೇಳಿಹರೆಂದು,
ಅಲೇಖನಾದ ಶೂನ್ಯ ಕಲ್ಲಿನೊಳಗಾದೆಯಲ್ಲಾ!