ಮನೆಯ ಮರೆಯಲ್ಲಿ ಇದ್ದ ಸತಿಗೆ ಪತಿ ಕೂಟವುಂಟೆ?
ಕಣ್ಣಿಗೆ ಮರೆಯಾದ ಹೊನ್ನ ಚೆನ್ನಾಗಿ ನೋಡಬಹುದೆ?
ಕಂಗಾಣದವ ಪ್ರತಿ ಶೃಂಗಾರವ ಮಾಡಿದಡೆ,
ತನ್ನ ಅಂಗದ ಕೈಯಲ್ಲದೆ ಕಂಗಳಿಗಿಲ್ಲ,
ಸುಸಂಗಹೀನನ ಮಂಗಳಮಯದಂತೆ.
ಅಂಗದ ಮೇಲೆ ಶಿವಲಿಂಗ ರುದ್ರಾಕ್ಷಿ ಭಸ್ಮಂಗಳ ಧರಿಸಿಪ್ಪ
ಕಳ್ಳನ ಕಾಟಕಾರದೆ ಕಲ್ಲಿನೊಳಗಾದನು.
ಅಲೇಖನಾದ ಶೂನ್ಯ, ಕಾಡದಿರು ಎನ್ನುವ.