Index   ವಚನ - 51    Search  
 
ಮಲವ ತೊಳೆಯಬಹುದಲ್ಲದೆ, ಅಮಲವ ತೊಳೆಯಬಹುದೆ ಅಯ್ಯಾ? ಮಾತಾಡಬಹುದಲ್ಲದೆ, ಅಜಾತನನರಿಯಬಹುದೆ ಅಯ್ಯಾ? ಮಾಟವ ಮಾಡಬಹುದಲ್ಲದೆ, ವರ್ಮದ ಕೂಟವ ಕೂಡಬಹುದೆ ಅಯ್ಯಾ? ರಣದ ಪಂಥವ ಹೇಳಬಹುದಲ್ಲದೆ, ಕಾದಬಹುದೆ ಅಯ್ಯಾ? ಮಾತುಗಳ ಕೂಡಿ ಓತು ಹೇಳುವರೆಲ್ಲರು ಉಮಾಕಾಂತನ ಬಲ್ಲರೆ? ಈ ಮಾತಿನ ಮಾಲೆಗೆ ಅಂಜಿ, ಅಲೇಖನಾದ ಶೂನ್ಯ ಕಲ್ಲಿನೊಳಗೆ ಅದೆ ಹೇಳಾ.