Index   ವಚನ - 137    Search  
 
ಧ್ಯಾನದಲ್ಲಿ ಕುಳ್ಳಿರ್ದು, ಜ್ಞಾನದಲ್ಲಿ ನೋಡಿ, ಮೌನ ಮುಗ್ಧವ ಮಾಡಿ, ಸ್ವಾನುಭಾವದಿಂದರಿದು, ಮತ್ತೇನೇನು ಹೊದ್ದಲೀಯದೆ, ತಾನು ತಾನಾಗಿ, ಜ್ಞಾನಕ್ಕತೀತನಾಗಿ, ಧ್ಯಾನ ಧಾರಣ ಸಮಾಧಿಯ ಮೆಟ್ಟಿನಿಂದ ನಿಜಲಿಂಗೈಕ್ಯಂಗೆ ನಮೋ ನಮೋ ಎಂಬೆ. ಇಂದೆನ್ನ ಭವ ನಷ್ಟವಾಗಿ ಹೋದವು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.