ಹೊತ್ತಾರೆಯಿಂದ ಅಸ್ತಮಯ ತನಕ
ಸುತ್ತಿರ್ದ ಮಾಯಾಪ್ರಪಂಚನೆ ಅಳೆವುತ್ತ ಸುರುವುತ್ತಲಿರ್ದು,
ಕತ್ತಲೆಯಾದರೆ, ಕಾಳುವಿಷಯದೊಳಗೆ ಮುಳುಗುತ್ತ,
ಸತ್ತು ಹುಟ್ಟುತ್ತ,
ಮತ್ತೆ ಬೆಳಗಾಗಿರ್ದು, ನಾನು ತತ್ವವ ಬಲ್ಲೆನೆಂದು
ನುಡಿವ ಕತ್ತಲೆಮನುಜರ
ಅತ್ತ ಹೊದ್ದದೆ, ಇತ್ತಲೆ ನಿಂದು ನಾಚಿ ನಗುತಿರ್ದ
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
Art
Manuscript
Music
Courtesy:
Transliteration
Hottāreyinda astamaya tanaka
suttirda māyāprapan̄cane aḷevutta suruvuttalirdu,
kattaleyādare, kāḷuviṣayadoḷage muḷugutta,
sattu huṭṭutta,
matte beḷagāgirdu, nānu tatvava ballenendu
nuḍiva kattalemanujara
atta hoddade, ittale nindu nāci nagutirda
nam'ma basavapriya kūḍalacennabasavaṇṇa.